news

ಕೆ.ಐ.ಸಿ ಕುಂಬ್ರದಲ್ಲಿನ ವಿದ್ಯಾರ್ಥಿಗಳ ಪ್ರತಿಭೆಗೆ ಅಭಿನಂದಿಸಿದ ವೈಟ್ ಸ್ಟೋನ್ ಮಾಲಕರಾದ ಬಿ.ಎಂ ಶರೀಫ್

ಮೌಲಾನ ಅನೀಸ್ ಕೌಸರಿಯಂತಹ ಪ್ರಬುದ್ಧ ಚಿಂತಕರ ನೇತೃತ್ವ ಮತ್ತು ಮಾರ್ಗದರ್ಶನ ಸಿಕ್ಕಿದರೆ ವಿದ್ಯಾರ್ಥಿಗಳಲ್ಲಿ ಇಂತಹ ಪ್ರತಿಭೆಗಳು ಬೆಳಕಿಗೆ ಬರುತ್ತದೆ ಎಂದು ವೈಟ್ ಸ್ಟೋನ್ ಮಾಲಕರಾದ ಉಧ್ಯಮಿ ಬಿ.ಎಂ ಶರೀಫ್ ಅಭಿಪ್ರಾಯ ಪಟ್ಟರು. ಇಂದು ಪುತ್ತೂರು ಕುಂಬ್ರದ ಕೆ.ಐ.ಸಿ ಗೆ ಟೀಂ ಬಿ ಹ್ಯೂಮನ್ ತಂಡದ ಸದಸ್ಯರೊಂದಿಗೆ ಭೇಟಿ ಕೊಟ್ಟ ಇವರು, ಮುಂದಿನ ಆಲಿಮಿಗಳು ಎಲ್ಲಾ ಕ್ಷೇತ್ರದಲ್ಲೂ ಪರಿಣತಿಯನ್ನು ಹೊಂದಬೇಕು, ಈ ನಿಟ್ಟಿನಲ್ಲಿ ಅವರಿಗೆ ಅತ್ಯುತ್ತಮ ತರಭೇತಿ ಸಿಗಬೇಕು. ಅದಕ್ಕೆ ಬೇಕಾದ ಸೌಲಭ್ಯಗಳನ್ನು ಅಭಿವೃದ್ದಿ ಪಡಿಸಲು ನಾವು ನಿಮ್ಮ …

ಕೆ.ಐ.ಸಿ ಕುಂಬ್ರದಲ್ಲಿನ ವಿದ್ಯಾರ್ಥಿಗಳ ಪ್ರತಿಭೆಗೆ ಅಭಿನಂದಿಸಿದ ವೈಟ್ ಸ್ಟೋನ್ ಮಾಲಕರಾದ ಬಿ.ಎಂ ಶರೀಫ್ Read More »

Ulama-Umara conference

ಅಸ್ಸಲಾಮು ಅಲೈಕುಂ ಆತ್ಮೀಯ ಕರೆಯೋಲೆ ಶೈಖುನಾ ಶಂಸುಲ್ ಉಲಮಾ ನ.ಮ ರವರ ಬದುಕು ಮತ್ತು ಆದರ್ಶ ಎಂಬ ವಿಷಯದಲ್ಲಿ ಸಮಸ್ತ ಕೇರಳ ಜಂಈಯ್ಯತುಲ್ ಉಲಮಾ ಇದರ ಅಧ್ಯಕ್ಷರಾದ ಶೈಖುನಾ ಜಿಫ್ರಿ ಮುತ್ತುಕೋಯ ತಂಙಳ್ ವಿಷಯ ಮಂಡಿಸಿ ಮಾತನಾಡಲಿದ್ದಾರೆ. ಶಂಸುಲ್ ಉಲಮಾ ನ.ಮ ರವರ ಪ್ರಮುಖ 40 ಭಾಷಣಗಳು, 40 ಲೇಖನಗಳು, 40 ನುಡಿಮುತ್ತುಗಳನ್ನು ಕನ್ನಡೀಕರಿಸಿದ ಪುಸ್ತಕವೂ ಬಿಡುಗಡೆಯಾಗಲಿದೆ. ಇನ್ ಶಾ ಅಲ್ಲಾಹ್. ಜಿಲ್ಲೆಯ ಉಲಮಾ ಉಮರಾಗಳು ಭಾಗವಹಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿದ್ದು ಪ್ರಸ್ತುತ ಕಾರ್ಯಕ್ರಮಕ್ಕೆ ಅತಿಥಿಯಾಗಿ ತಮ್ಮನ್ನು …

Ulama-Umara conference Read More »

ಖುರ್ಆನಿನ ಆಳ ಅರಿತ ಉಲಮಾಗಳಾಗಬೇಕು: ಬಿ.ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್

ಕೆಐಸಿ ಕುಂಬ್ರ : ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಇದರ ವಿಧ್ಯಾರ್ಥಿ ಸಂಘಟನೆ ಅಲ್ ಕೌಸರ್ ಸ್ಟೂಡೆಂಟ್ಸ್ ಎಸೋಸಿಯೇಶನ್ ಇದರ ವತಿಯಿಂದ ತಿದ್ಕಾರ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ನಿರ್ವಹಿಸಿ ಖುರ್ಆನಿನ ಆಳ ಅರಿತ ಉಲಮಾಗಳಾಗಲು ವಿಧ್ಯಾರ್ಥಿಗಳಿಗೆ ಕರೆ ನೀಡಿದರು. ಸಂಸ್ಥೆಯ ಉಪ ಪ್ರಾಂಶುಪಾಲರಾದ ಅಝ್ಮತುಲ್ಲಾ ಹುದವಿ, ಪ್ರಾಧ್ಯಾಪಕರಾದ ಆರಿಫ್ ಭಾಖವಿ, ಅನೀಸ್ ಕೌಸರಿ, ಅಶ್ರಫ್ ವಾಫಿ, ಅನಸ್ ವಾಫಿ ಶುಭ ಹಾರೈಸಿದರು. ವಿಧ್ಯಾರ್ಥಿ ಅಲ್ ಸಿನಾನ್ ಸ್ವಾಗತಿಸಿ ಫರ್ಹಾನ್ ಧನ್ಯವಾದ ಸಮರ್ಪಿಸಿದರು.

ಕೆಐಸಿ ಕುಂಬ್ರ : ಅನುಸ್ಮರಣೆ ಹಾಗೂ ದುವಾ ಮಜ್ಲಿಸ್

ಕೆಐಸಿ ಕುಂಬ್ರ: ಕರ್ನಾಟಕದ ರಾಜ್ಯದ ಪ್ರತಿಷ್ಠಿತ ಮತ ಭೌತಿಕ ಸಮನ್ವಯ ಶಿಕ್ಷಣ ಸಂಸ್ಥೆ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಕೆಐಸಿ ಕುಂಬ್ರ ಇದರ ವಿಧ್ಯಾರ್ಥಿ ಸಂಘಟನೆಯಾದ ಅಲ್ ಕೌಸರ್ ಸ್ಟೂಡೆಂಟ್ಸ್ ಎಸೋಸಿಯೇಷನ್ ವತಿಯಿಂದ ಇಂದು (ಡಿ.15) ಮಗ್ರಿಬ್ ನಮಾಝಿನ ಬಳಿಕ ಸಮಸ್ತದ ಅಗಲಿದ ಉಲಮಾ ಶ್ರೇಷ್ಟರ ಅನುಸ್ಮರಣೆ ನಡೆಯಲಿದೆ.  ಸಮಸ್ತ ಕೇರಳ ಜಂಈಯ್ಯತುಲ್ ಉಲಮಾ ಇದರ ಕೇಂದ್ರ ಮುಶಾವರ ಸದಸ್ಯರಾದ ಬಿ.ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ. ಹಲವಾರು ಉಲಮಾ ಹಾಗೂ ಉಮರಾ ನಾಯಕರು ಭಾಗವಹಿಸುವರು.